ನವೆಂಬರ್ 7ರ ಸೀಕ್ರೆಟ್ ಬಗ್ಗೆ ಬಾಯ್ಬಿಟ್ಟ ಕಿಚ್ಚ ಸುದೀಪ್ | FIlmibeat Kannada

2017-11-06 3,087

Finally, Kiccha Sudeep reveals the Nov 7 secret. 'Prema Baraha' teaser launch of Arjun Sarja 's upcoming directorial.


ಕೊನೆಗೂ 'ನವೆಂಬರ್ 7'ರ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್.! ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಸತೀಶ್ ನೀನಾಸಂ, ಸೇರಿದಂತೆ ಕನ್ನಡದ ಬಹುತೇಕ ನಟರು ಕಳೆದ ಒಂದು ವಾರದಿಂದ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದ್ದಾರೆ. ನವೆಂಬರ್ 7' ಎಂಬ ಒಂದೇ ಮಂತ್ರವನ್ನ ಜಪಿಸುತ್ತಿದ್ದಾರೆ. 'ನವೆಂಬರ್ 7ಕ್ಕೆ ಕಾಯ್ತಿರಿ', 'ವಾಚ್ ಆನ್ ನವೆಂಬರ್ 7' ಎಂದು ಹೇಳಿ ಎಲ್ಲರ ತಲೆಯಲ್ಲೂ ಹುಳ ಬಿಡುತ್ತಿದ್ದಾರೆ. ಆ ದಿನ ಒಬ್ಬರು ದೊಡ್ಡ ಗೆಸ್ಟ್ ಬರ್ತಾರೆ ಎಂದು ಟೆನ್ಷನ್ ಕೊಡ್ತಿದ್ದಾರೆ. ಆದ್ರೆ, ಆ ದಿನ ಯಾರು ಬರ್ತಾರೆ, ಏನು ವಿಶೇಷ ಎನ್ನುವುದನ್ನ ಮಾತ್ರ ಯಾರೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಈಗ ಸುದೀಪ್ 'ನವೆಂಬರ್-7' ರ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, 'ನವೆಂಬರ್-7' ಏನು. ದರ್ಶನ್, ಅಂಬರೀಶ್, ಅರ್ಜುನ್ ಸರ್ಜಾ ಅವರಂತೆ ಸುದೀಪ್ ಕೂಡ 'ನವೆಂಬರ್ 7'ಕ್ಕೆ ಬರ್ತಿದೆ ನೋಡಿ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಮತ್ತಷ್ಟು ಕುತೂಹಲ ಹಚ್ಚಿಸಿದೆ. ಆದ್ರೆ, ಈ ಕುತೂಹಲಕ್ಕೆ ಅಭಿನಯ ಚಕ್ರವರ್ತಿ ಒಂದು ರೀತಿಯಲ್ಲಿ ತೆರೆ ಎಳೆದಿದ್ದಾರೆ.